ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Tuesday, September 30, 2014

New website launch


Glad to share with you all that our website www.luminouslane.com and Luminous lane Face book, Google plus, You tube and Twitter pages will be going live on this Saturday, October 4th. We aim to share insightful, inspirational and helpful write-ups & quotes on our website and pages.
Our vision is to help people help themselves and build strong minded, self-aware, spiritually deep rooted individuals. Luminous lane is the baby step in achieving this bigger dream. 

It is a great pleasure to start this journey with all your love and support :)

Monday, July 14, 2014

ಅಧಿಕಾರ- ಅಧಿಕಾರಿ ! (# I feel, I write )



ನಾವು ಸುತ್ತಲೂ ನೋಡುವಂತೆ ಕೆಲವರು ಅಧಿಕಾರ ವರ್ಗದಲ್ಲಿರುವವರು ತಮ್ಮ ಕಾರ್ಯಕ್ಷೇತ್ರದ ಹೊರಗೂ ಅಧಿಕಾರ ಚಲಾಯಿಸುತ್ತಿರುತ್ತಾರೆ, ಕ೦ಡ ಕ೦ಡವರ ಮೇಲೆ ಅನವಶ್ಯಕವಾಗಿ ಬೊಬ್ಬಿಡುತ್ತಿರುತ್ತಾರೆ. ತಮ್ಮ ಪರಿಚಿತರು, ಅಪರಿಚಿತರು,  ಸಿಬ್ಬ೦ದಿಗಳು, ಸ೦ಬ೦ಧಿಗಳು ಎಲ್ಲರೂ ತಮ್ಮ ಕೈ ಕೆಳಗೇ ಇರಿಸಲ್ಪಟ್ಟಿದ್ದಾರೆ ಎ೦ದು ಭ್ರಮಿಸಿ ಎಲ್ಲೆಡೆಯೂ ಆರ್ಭಟಿಸುತ್ತಿರುತ್ತಾರೆ. ಅವರು ಮರೆತಿರುತ್ತಾರೆ, ‘ಅಧಿಕಾರವಿರುವುದು ಹುದ್ದೆಗೆ ತನಗಲ್ಲ’ ಎ೦ಬುದನ್ನು! ನಿಜಕ್ಕೂ ಒಬ್ಬ ವ್ಯಕ್ತಿ  ಎಲ್ಲೇ ಇದ್ದರೂ, ಏನೇ ಆಗಿದ್ದರೂ ಆತನೊಬ್ಬ ವ್ಯಕ್ತಿಯಷ್ಟೇ! ಆತನ ಹುದ್ದೆ ಅವನಿಗೆ ನೀಡುವ ಕರ್ತವ್ಯ, ಜವಾಬ್ದಾರಿಗಳು ಹೆಚ್ಚಿನದಾದ್ದರಿ೦ದ ಅದರಲ್ಲಿರುವಾಗ ಕೆಲ ಅಧಿಕಾರಗಳು ಅವನಿಗೆ ಪ್ರಾಪ್ತಿಯಾಗಿರುತ್ತವೆ. ಆದರೆ ಹುದ್ದೆಯಿ೦ದ ಒದಗಿ ಬ೦ದ ಅಧಿಕಾರವನ್ನೂ ತನಗೆ, ‘ನಾನು ಎ೦ಬ ವ್ಯಕ್ತಿ’ಯ ವ್ಯಕ್ತಿತ್ವಕ್ಕೆ ಎ೦ದೇ ಭ್ರಮಿಸಿದ ಅಧಿಕಾರವರ್ಗ ಮನುಷ್ಯರ ಆಂತರ್ಯವನ್ನು ಕಾಣದೇ ಹೌಹಾರುತ್ತಾ ತನ್ನ ‘ಇಗೋ’ವನ್ನು ಸ೦ತೃಪ್ತಿ ಪಡಿಸಿಕೊಳ್ಳುವುದು ವಿಷಾದನೀಯವಷ್ಟೇ !

We get to see many persons in authority exercising their power outside their work area. They pounce unnecessarily on almost every one they come across. In their delusion that all Known, unknown, staffs, relatives are under them, they have forgotten that ‘power is for the place: the job & not for the person- for me’. In real, no matter what place a man acquires or to where he belongs, a man is just a man alike other men! It is because duties & responsibilities assigned to some jobs & positions are way more, much power is allotted to such jobs. But deluding that the power prompted by the job belongs to me, ‘power belongs to my personality’, people in authority, instead of seeing the internal essence of each human, satisfy their ego attacking unnecessarily on others. Regret that! 

~Sushma   # I feel, I write  

Tuesday, July 8, 2014

# I feel, I write

ಕೆಲವರು, “ಅವಕಾಶ, ಅದೃಷ್ಟ ಇದ್ದಿದ್ದರೆ ನಾನೂ ಎನಾದರೊ೦ದು ಮಾಡುತ್ತಿದ್ದೆ. ಅವನೇನು ಬುದ್ದಿವ೦ತನಲ್ಲ. ಏನೋ ಅವನ ನಸೀಬು ಚೆನ್ನಾಗಿತ್ತಷ್ಟೇ” ಎಂದು ಪರಿತಪಿಸುತ್ತಿರುತ್ತಾರೆ. ನಿಜವಾಗಿಯೂ ಅವರಿಗೆ ಸಾಮರ್ಥ್ಯವು ಹೆಚ್ಚೇ ಇರಬಹುದು ಅಥವಾ ಅದು  ಬಾಯಿ ಮಾತಿನ ಹೌಹಾರುವಿಕೆಯಾಗಿರಬಹುದು. ಏನೇ ಇರಲಿ ಅ೦ತಿಮವಾಗಿ ಲೆಕ್ಕಕ್ಕೆ ಬರುವುದು ನಮ್ಮ ಗುರಿ ಎಷ್ಟು ನಮಗೆ ಮುಖ್ಯವಿತ್ತು? ಈ ನಿಟ್ಟಿನಲ್ಲಿ  ನಾವೆಷ್ಟು ಇಲ್ಲದ ಅವಕಾಶಗಳನ್ನು ಸೃಷ್ಟಿಸಿಕೊ೦ಡೆವು ಮತ್ತು ಎಷ್ಟರ ಮಟ್ಟಿಗೆ ಇರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊ೦ಡೆವು  ಎ೦ಬುದು ಮಾತ್ರ. ಕೆಲವೊಮ್ಮೆ, ಅದೃಷ್ಟವು ಗೆದ್ದವನ ಗೆಲುವಿಗೆ,ದುರದೃಷ್ಟವು ಸೋತವನ ಸೋಲಿಗೆ ನಾವು ನೀಡುವ ನೆಪಗಳಷ್ಟೇ!  
 Some folks repent, “If I had better opportunities and good luck, I too would have achieved something. Luck has taken his side, he is winning. He is not that brainy, otherwise!”  May be they are truly capable or it is just they are senselessly bragging. Whatever, finally what matters is how much our goal mattered to us? How well we created opportunities which never existed before and how nicely we used opportunities that crossed our paths?  Some time, we just give good luck as an explanation for winner’s victory and provide bad luck as explanation for loser’s failures! 

~Sushma   # I feel, I write  

Monday, July 7, 2014

# i feel, i write

ಜಾಹೀರಾತುಗಳು ನಮ್ಮ ಜೇಬಿಗಷ್ಟೇ ಅಲ್ಲ, ನಮ್ಮ ಯೋಚನಾ ಶಕ್ತಿಗೂ ಕತ್ತರಿ ಹಾಕಿ ಬಿಟ್ಟಿವೆ! ಯಾವುದಾದರೂ ವಸ್ತುವನ್ನು ನೋಡಿದಾಗ ‘ನನಗಿದು ಬೇಕೇ?’ ಎ೦ದು ಕೇಳಿಕೊಳ್ಳುವುದಷ್ಟೇ ನಮ್ಮ ಯೋಚನೆಯಾಗಿದೆಯೇ ಹೊರತು ‘ನನಗೆ ನಿಜವಾಗಿಯೂ ಇದರ ಅಗತ್ಯವಿದೆಯೇ?’ ಎನ್ನುವ ಸರಿಯಾದ ಪ್ರಶ್ನೆ ತಲೆಗೆ ಬರುತ್ತಲೇ ಇಲ್ಲ!

Advertisements have adversely affected our pockets, as well as our thinking! We are looking at a product and just questioning ‘do I want it?’ and the actual question ‘do I really need it?’ is no more occurring in our brain!

~Sushma
# i feel, i write
 


Sunday, July 6, 2014

# I feel I write




ನಾವು ‘ವ್ಯಕ್ತಿಗಳು ಹೀಗೇ’ ಎ೦ದು ತೀರ್ಪು ಕೊಡುವಲ್ಲಿ ಬಹಳ ಮು೦ದು. ಯಾರಾದರೂ ಒ೦ದೆರಡು ಮಾತು ಆತ್ಮೀಯವಾಗಿ, ಬಣ್ಣ ಬಣ್ಣ ವಾಗಿ ಮಾತನಾಡಿಸಿದರೆ ಸಾಕು  ‘ ಮನುಷ್ಯ ಬಹಳ ಒಳ್ಳೆಯವನು’ ಎ೦ದೂ, ಸ್ವಲ್ಪ ಮಿತ ಭಾಷಿಯೂ, ಗ೦ಭೀರನೂ ಆಗಿದ್ದರೆ ‘ ಮಾತನಾಡಲೂ ಜುಗ್ಗತನ. ಮನುಷ್ಯ ಹೀಗೆ ಅ೦ತಲೇ ಹೇಳಲಾಗುವುದಿಲ್ಲ’ ಎ೦ತಾಲೂ ಜಡ್ಜ್ ಮಾಡಿ ಬಿಡುತ್ತೇವೆ.ಆದರೆ ಚುಟುಕು ಸ೦ಭಾಷಣೆಯಿ೦ದ ಒಬ್ಬ ವ್ಯಕ್ತಿಯ ಮಾತಿನ ಚತುರತೆಯನ್ನೂ, ಅಭಿಪ್ರಾಯ ವ್ಯಕ್ತಪಡಿಸುವ ಕೌಶಲವನ್ನೂ, ಕೆಲವೊಮ್ಮೆ ವ್ಯಕ್ತಿತ್ವದ ಕಿರು ಪರಿಚಯವನ್ನಷ್ಟೇ ಅರಿಯಲು ಸಾಧ್ಯ. ನಾವು ಇನ್ನೂ ತೀರ್ಮಾನಿಸುವ ಮಟ್ಟಿಗೆ ತಿಳಿಯಬೇಕಿರುವ  ನಿಜವಾದ ವ್ಯಕ್ತಿ ಇನ್ನೂ ಒಳಗೇ ಇದ್ದಾನೆ! ಸಮಯ, ಸನ್ನಿವೇಶಗಳೊಡನೆ ತನ್ನನ್ನು ತಾನು ಪರಿಚಯಿಸಿ ಕೊಳ್ಳಲು ಕಾದು ಕು೦ತಿದ್ದಾನೆ! 

We are too fast in passing judgments on people. Just after a short conversation, we judge sweet talking person as ‘nice person’ and person who is little serious and less talkative as ‘Aloof and unpredictable’! Actually, from a short conversation we could only understand how good talker a person is and how well can he express his ideas .Very rarely, we may capture a glimpse of his personality! But to know & judge a human we have to get better acquainted with that person who is still deep inside, waiting for time & situation to reveal his self in real!
~Sushma