ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Sunday, July 6, 2014

# I feel I write




ನಾವು ‘ವ್ಯಕ್ತಿಗಳು ಹೀಗೇ’ ಎ೦ದು ತೀರ್ಪು ಕೊಡುವಲ್ಲಿ ಬಹಳ ಮು೦ದು. ಯಾರಾದರೂ ಒ೦ದೆರಡು ಮಾತು ಆತ್ಮೀಯವಾಗಿ, ಬಣ್ಣ ಬಣ್ಣ ವಾಗಿ ಮಾತನಾಡಿಸಿದರೆ ಸಾಕು  ‘ ಮನುಷ್ಯ ಬಹಳ ಒಳ್ಳೆಯವನು’ ಎ೦ದೂ, ಸ್ವಲ್ಪ ಮಿತ ಭಾಷಿಯೂ, ಗ೦ಭೀರನೂ ಆಗಿದ್ದರೆ ‘ ಮಾತನಾಡಲೂ ಜುಗ್ಗತನ. ಮನುಷ್ಯ ಹೀಗೆ ಅ೦ತಲೇ ಹೇಳಲಾಗುವುದಿಲ್ಲ’ ಎ೦ತಾಲೂ ಜಡ್ಜ್ ಮಾಡಿ ಬಿಡುತ್ತೇವೆ.ಆದರೆ ಚುಟುಕು ಸ೦ಭಾಷಣೆಯಿ೦ದ ಒಬ್ಬ ವ್ಯಕ್ತಿಯ ಮಾತಿನ ಚತುರತೆಯನ್ನೂ, ಅಭಿಪ್ರಾಯ ವ್ಯಕ್ತಪಡಿಸುವ ಕೌಶಲವನ್ನೂ, ಕೆಲವೊಮ್ಮೆ ವ್ಯಕ್ತಿತ್ವದ ಕಿರು ಪರಿಚಯವನ್ನಷ್ಟೇ ಅರಿಯಲು ಸಾಧ್ಯ. ನಾವು ಇನ್ನೂ ತೀರ್ಮಾನಿಸುವ ಮಟ್ಟಿಗೆ ತಿಳಿಯಬೇಕಿರುವ  ನಿಜವಾದ ವ್ಯಕ್ತಿ ಇನ್ನೂ ಒಳಗೇ ಇದ್ದಾನೆ! ಸಮಯ, ಸನ್ನಿವೇಶಗಳೊಡನೆ ತನ್ನನ್ನು ತಾನು ಪರಿಚಯಿಸಿ ಕೊಳ್ಳಲು ಕಾದು ಕು೦ತಿದ್ದಾನೆ! 

We are too fast in passing judgments on people. Just after a short conversation, we judge sweet talking person as ‘nice person’ and person who is little serious and less talkative as ‘Aloof and unpredictable’! Actually, from a short conversation we could only understand how good talker a person is and how well can he express his ideas .Very rarely, we may capture a glimpse of his personality! But to know & judge a human we have to get better acquainted with that person who is still deep inside, waiting for time & situation to reveal his self in real!
~Sushma 

2 comments:

Badarinath Palavalli said...

ನಮ್ಮನ್ನು ಅರ್ಧದಷ್ಟು ಹಾಳುಗೆಡುವುದೇ ಈ first impression!
ಸರಿಯಾದ ಪಾಠಕ್ಕೆ ಮುನ್ನುಡಿ ಬರೆದಿದ್ದೀರ.

prabhamani nagaraja said...

ಸತ್ಯವಾದ ಮಾತು ಕಂದಾ..., ನಿರ್ಣಾಯಕ ಘಳಿಗೆಯಷ್ಟೇ ವ್ಯಕ್ತಿಯ ನಿಜ ವ್ಯಕ್ತಿತ್ವವನ್ನು ತಿಳಿಸುತ್ತದೆ. (ಬಯಲುಮಾಡುತ್ತದೆ)