ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Thursday, June 26, 2014

# ನೆನಪಿನಿಂದಶಿವಮೊಗ್ಗದ ಸ್ಟೇಷನ್ನಿನಲ್ಲಿ ಟ್ರೈನು ಕಾಯುತ್ತಲಿದ್ದೆ. ಏನೋ ಬೇಕೇ ಬೇಕೆಂದು ರಚ್ಚೆ ಹಿಡಿದಂತಿದ್ದ ೩-೪ ವರ್ಷದ ಮೊಮ್ಮಗುವನ್ನು ಸಂತೈಸುವ ಪ್ರಯತ್ನದಲ್ಲಿದ್ದ೦ತೆ ಕಂಡ ಅಜ್ಜಿ ಹೇಳುತ್ತಿದ್ದಳು, “ಮುಂದೆ ರಾಜನಂಗೆ ಬಾಳ್ತೀಯಂತೆ ಮಗಾ. ಕಾರಲ್ಲಿ ಓಡಾಡುವಿಯಂತೆ.. ಹ೦ಗ್ ಹಠ ಮಾಡಬಾರ್ದು” ಅಜ್ಜಿಯ ಆಶೋತ್ತರಗಳಿಗೆ ಭವಿಷ್ಯದ ಕನಸು, ಆಶಯ ಇಟ್ಟುಕೊಳ್ಳುವ ವಯಸ್ಸಿಗೆ ಇನ್ನೂ ಬಂದಿರದ ಮೊಮ್ಮಗು ಬಗ್ಗಲಿಲ್ಲ. ಇತ್ತ ಅತ್ತೆಲ್ಲೋ ಹೋಗಿದ್ದ ಅಮ್ಮನಂತಿದ್ದ ಹುಡುಗಿ ಬಂದು ಪರಿಪರಿಯಾಗಿ ಓಲೈಸಿದರೂ ಮಗು ಸುಮ್ಮನಾಗಲಿಲ್ಲ. ಕಡೆಗೆ ದಾ೦ಗುಡಿಯಿಡುತ್ತಾ ಓಡೋಡಿ ಬಂದ ಟ್ರೈನಿನ ಸದ್ದು ಕೇಳಿದೊಡನೇ ಮಗು ಥಟ್ಟನೆ ಗಪ್ ಚುಪ್! ಅಷ್ಟೇ ಸಾಕಾಯಿತು ಅವನನ್ನು ಶಾಂತವಾಗಿಸಲು! ಕೆಲವು ಸ೦ದರ್ಭಗಳಿಗೆ ದೊಡ್ಡ ದೊಡ್ಡ ಉತ್ತರಗಳು ಬೇಕಿರುವುದಿಲ್ಲ. ಸಣ್ಣದೊಂದು ಡಿಸ್ಟ್ರಾಕ್ಷನ್ ಸಾಕಿರುತ್ತದೆ. ಅಲ್ಲವೇ? 
# ನೆನಪಿನಿಂದ @ಸುಷ್ಮ

No comments: