ವಿವೇಕದ ಬಗೆಗೆ ಕೇಳಿ ತಿಳಿದವರೆಲ್ಲಾ ವಿವೇಕಿಗಳಾಗಿರಬೇಕೆಂದಿಲ್ಲ.‘ಜ್ಙಾನ’ವ ಪಸರಿಸುವ ಗೃಂಥಗಳನ್ನು ಪಠಿಸಿದವರೆಲ್ಲಾ ಜ್ಞಾನಿಗಳಾಗಬೇಕೆಂದಿಲ್ಲ. ಗೆಳೆಯಾ, ಸುಬುದ್ಧಿ, ಸನ್ಮಾರ್ಗ, ಸತ್ಚಿಂತನೆಗಳಿಂದಾವೃತವಾದ ‘ಆ ಪುಸ್ತಕ’ವನ್ನು ಓದುತ್ತಾ ಅದೇ ನೀನಾಗುವ ನಿನ್ನಲ್ಲಿ, ಅದನು ಮುಚ್ಚಿಟ್ಟ ಮರುಕ್ಷಣ ದಲ್ಲೇ ‘ಸಣ್ಣ’ ದೆನಿಸಿ ಕೊಳ್ಳುವ ಬುದ್ಧಿಯೊಂದು ಹೊಗೆಯಾಡುತ್ತದಲ್ಲಾ ಅದನ್ನು ನೋಡಿದಾಗಲೆಲ್ಲಾ ನನಗೆನಿಸುವುದು-
“ನಾವು ಬೆಳಕು ಮೈ ಮೇಲೆ ಬಿದ್ದಾಗ ಹೊಳೆಯುವ ‘ಕಲ್ಲು’ಗಳಂತೆ. ಅದು ನಮ್ಮ ಮೇಲೆ ಚೆಲ್ಲಿದಾಗ ದೇಹದ ಮಿನುಗನ್ನೆಲ್ಲಾ ಹೊರಸೂಸುತ್ತಾ ‘ಬೆಳಕಿನ ಭಾಗ’ದಂತೆ ಹೊಳೆಯುವ ನಾವು, ಬೆಳಕು ನಂದಿದ ಅಥವಾ ಪಕ್ಕ ಸರಿದ ಮರುಕ್ಷಣವೇ ನಮ್ಮ ಮೂಲ ಲಕ್ಷಣಕ್ಕೆ ಮರಳುತ್ತೇವೆ..ಎಷ್ಟಾದರೂ ‘ಕಲ್ಲು’ ಗಳಲ್ಲವೇ ನಾವು..!?

(image- web)
7 comments:
ತುಂಬಾ ಅದ್ಬುತ ಚಿಂತನೆ. ತುಂಬಾ ಚನ್ನಾಗಿದೆ
ಚಿಂತನಾರ್ಹ ಬ್ಲಾಗ್ ಬರಹ, ಮನೋ ನಿಗ್ರಹ ಒಂದೇ ಮಾನವನ ಏಳಿಗೆಗೆ ಕಾರಣ ಅನ್ನಬಹುದು.
ನನ್ನ ಬ್ಲಾಗಿಗೂ ಬನ್ನಿರಿ.
@ರಾಕೇಶ್, ವಂದನೆಗಳು. ಬರುತ್ತಲಿರಿ..
ಧನ್ಯವಾದ ಪಲವಳ್ಳಿ ಸರ್,
ನಿಮ್ಮ ಮಾತು ಅಕ್ಷರಶಃ ನಿಜ :)
ಸದ್ಯದಲ್ಲೇ ನಿಮ್ಮ ಬ್ಲಾಗ್ನತ್ತ ಬರುವೆ.
ಸುಷ್ಮಾ,
ಸತ್ಯವಾದ ಮಾತು.
nice.
ಹೊಳೆಯುವ ಕಲ್ಲುಗಳಿನ ಹೋಲಿಕೆ ಚೆನ್ನಾಗಿದೆ
ನಿಜ, ಆಡುವುದಕ್ಕೂ ನಡೆಯುವುದಕ್ಕೂ ಸ್ಥಿತ್ಯಂತರ ಇದ್ದಾಗ, ನಾವು ಬರೀ ಚಂದ್ರರೇ!
Post a Comment