ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..Monday, December 20, 2010

'ಫಲ'

ಅವನು 'ಮನಸ್ಸಿಗೆ' ಹೇಳಿದ-

“ಪಕ್ಕದ ಮನೆಯಲ್ಲಿ ಬೆಳೆದು ನಿಂತ ಸಸ್ಯದ ‘ಫಲ’ವನ್ನು ಭುಂಜಿಸುವುದು ಸುಲಭ ಸಾಧ್ಯ!
ನಾನು ನನ್ನ ಮನೆಯಲ್ಲಿ ಸಸಿ ನೆಟ್ಟು, ಅದಕ್ಕೆ ನೀರೆರೆದು, ಹೊಂದುವ ಗೊಬ್ಬರವ ಹಾಕಿ, ಯಾವ ಹಾನಿಯೂ ಆಗದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಾ ವರ್ಷ ಗಟ್ಟಲೆ ಕಾದು ಕುಂತರೂ ಅದು ಬಿಡುವ ಫಲ ಸಿಹಿಯೋ, ಸಪ್ಪೆಯೋ, ನೀರಸವೋ ಯಾರು ಬಲ್ಲರು?
ಬದಲಿಗೆ ಪಕ್ಕದ ಮನೆಯಲ್ಲಿ ಪರಿಶ್ರಮದ ‘ಫಲ’ ತೂಗುತ್ತಿರುವುದು ಕಾಣುತ್ತಿದೆ! ಅದನ್ನು ಅವರಿವರ ಬಳಿ ಕೇಳಿ, ರುಚಿಕರವೋ, ಕೊಳ್ಳಲು ಯೋಗ್ಯವೋ ಎಂದು ವಿಚಾರಿಸಿ ಇಂತಿಷ್ಟು ಕಾಸು ಕೊಟ್ಟರೆ ಮುಗಿಯಿತು!”


ಮನಸ್ಸೆಂದಿತು-

“ಮಿತ್ರಾ, ಸತ್ಯ ಸತ್ಯ. ಅದಕ್ಕೆಂದೇ ಹಲವು ಭಾಂಧವರು ಬೆಳೆದು ನಿಂತದ್ದಕ್ಕೆ ಕೈ ಹಾಕುವುದರಲ್ಲೇ ಮಗ್ನರಾಗಿರುವರು!
ತಮ್ಮ ‘ಫಲ’ವನ್ನು ಪಡೆಯಲು ಗಿಡ ಬೆಳೆಸುವುದರಲ್ಲಿರುವ ಆನಂದವನ್ನು ಅನುಭವಿಸುವರಾಗಿರಬೇಕು! ‘ಫಲ’ದ ಮೇಲೆ ಕಣ್ಣಿಟ್ಟವರಲ್ಲ! ಚಿಂತಿಸು....”

10 comments:

sunaath said...

Sushma,
It is beautiful!

prabhamani nagaraja said...

`ಕರ್ಮಣ್ಯೇವಾದಿಕಾರಸ್ತೆ ಮಾ ಫಲೇಶು ಕದಾಚನಾ' ಎನ್ನುವ ಭಗವದ್ಗೀತೆಯ ನುಡಿ ಈಗ ಅರ್ಥವಿಹೀನವಾಗಿ `ಫಲ'ದತ್ತಲೇ, (ಅದರಲ್ಲೂ ಬೇರೆಯವರು ಬೆಳೆಸಿದ ಫಲ!) ದೃಷ್ಟಿ ಕೇ೦ದ್ರೀಕೃತವಾಗಿರುವುದು ಎ೦ಥಾ ವಿಪರ್ಯಾಸವಲ್ಲವೇ? ಬಹಳ ಚೆನ್ನಾಗಿದೆ ಸುಷ್ಮಾ `ನಿನಗನಿಸಿದ್ದು', ಇ೦ಥಾ ಆಲೋಚನೆಯ ಫಲಗಳು ಮತ್ತಷ್ಟು ಬರುತ್ತಿರಲಿ. ಅಭಿನ೦ದನೆಗಳು.

Pradeep Rao said...

Definitely chintisuve... lekhana chikkadaadaru dodda vichaara hondide..

ಮನಸು said...

sushma,
tumba chennagide, enta artavanna koDutte... super

prabhamani nagaraja said...

ನಿನ್ನದೇ ಸ್ವ೦ತ ಆಲೋಚನೆಗಳನ್ನು `ನನಗನಿಸಿದ್ದು' ಮೂಲಕ ಹ೦ಚುತ್ತಿರುವ ನಿನ್ನ
ಪ್ರಯತ್ನ ಶ್ಲಾಘನೀಯ ಸುಷ್ಮಾ, ಮು೦ದುವರೆಸು. ಹೊಸತಿಗಾಗಿ ಬ೦ದು ನಿರಾಶಳಾದ ಅಮ್ಮ!

Sushma Sindhu said...

ಪ್ರದೀಪ್ ರವರೆ,
ತಡವಾದ ಪ್ರತಿಕ್ರಿಯೆಗೆ ಕ್ಷಮೆಯಿರಲಿ. ಬ್ಲಾಗುಗಳಿಗೆ ಸ್ವಾಗತ. ಬರುತ್ತಿರಿ :)
@ಸುಗುಣ ಮೇಡಂ ಧನ್ಯವಾದ :)
@ಅಮ್ಮ, ಹೊಸದು ಇನ್ನೊ೦ದು ಬ್ಲಾಗಿನಲ್ಲಿದೆ. ಇಲ್ಲಿಯೂ ಬರೆಯುತ್ತೇನೆ:)

ಸಾಗರದಾಚೆಯ ಇಂಚರ said...

Sushma,

tumba sundara saalugalu

noorakke nooru satya

naavu beleda phasalige kaayuvashtu taalme namagellide?

Sushma Sindhu said...

@ ಗುರುಮೂರ್ತಿಯವರೇ,
ಧನ್ಯವಾದ .. ಕೆಲವೊಮ್ಮೆ, ಬೆಳೆದ ಫಸಲನ್ನು ಕೇಳುವುದರಲ್ಲಿ ನಿಸ್ಸೀಮ ರಾಗಿರುವವರನ್ನೇ ಸಮಾಜ 'ಬುದ್ದಿವ೦ಥ' ರೆ೦ದು ಗುರುತಿಸುತ್ತಿದೆಯೇನೋ ಎನಿಸುತ್ತದೆಯಲ್ಲವೇ?
ಇತ್ತ ಬರುತ್ತಿರಿ.

Raghu said...

Tumba chennagide..meaningful..!
-Raghu

RAGHU said...

nice..

visit my blog @ http://ragat-paradise.blogspot.com

RAGHU