* ನಮ್ಮ 'ವೈಫಲ್ಯ'ಗಳನ್ನೇ 'ವೈಕಲ್ಯ'ಗಳೆಂದು ಭಾವಿಸುವ ನಾವು 'ಸಾಫಲ್ಯ'ತೆಯೆಡೆಗೆ ಹೆಜ್ಜೆ ಹಾಕುವತ್ತ ಸದಾ ಎಡವುತ್ತಾ ಕುಸಿದು ಕುಳಿತು ಬಿಡುತ್ತೇವೆ. ಆದರೆ ತಮ್ಮ 'ವೈಕಲ್ಯ'ಗಳನ್ನೂ ಸಹ 'ವೈಫಲ್ಯ'ಗಳೆಂದು ಭಾವಿಸದೆ 'ಸಾಫಲ್ಯ'ತೆಯೆಡೆಗೆ ಸಾಗುತ್ತಿರುವ ಅತ್ಯಧ್ಬುತ ಮನಸ್ಸುಗಳನ್ನು ಈ ಜಗತ್ತು ಕಂಡಿದೆ ಎಂಬುದನ್ನು ನಾವು ಮರೆಯಬಾರದು.
* ಎಲ್ಲಾ ತರಹದ ಬದುಕುಗಳನ್ನು ನಡೆಸುತ್ತಿರುವವರೂ ಇದ್ದಾರೆ. ಯಾರೂ ಬೆಳಗಾಗೆದ್ದು, 'ಒಂದಷ್ಟು ಆತ್ಮಸ್ಥೈರ್ಯ ಸಂಪಾದನೆ ಮಾಡೋಣ' ಎಂದು ಹೊರಡುವುದಿಲ್ಲ, ಆತ್ಮಸ್ಥೈರ್ಯ ವೃದ್ದಿಸಿಕೊಳ್ಳೋಣ ಎಂದು ತಲೆ ಕೆಡಿಸಿಕೊಳ್ಳುವುದಿಲ್ಲ, ಇಲ್ಲವೇ ಇ೦ದಿನಿ೦ದ ನನಗೆ ಭರ್ತಿ ಆತ್ಮ ವಿಶ್ವಾಸವಿದೆ, ನಾನು ಮಾಡುವ ಕೆಲಸದಲ್ಲೆಲ್ಲ ಯಶಸ್ವಿಯಾಗೇ ತೀರುವೆನೆ೦ದು ಪಣ ತೊಡುವುದನ್ನು ಕಾಣುವುದಿಲ್ಲ. ಇನ್ನೂ ಹೇಳಬೇಕೆಂದರೆ ಅತ್ಮಸ್ಥೈರ್ಯವೆಂಬ ಪದ ಪರಿಚಯವೇ ಬಹಳಷ್ಟು ಮಂದಿಗಿಲ್ಲ. ಮತ್ತೇಕೆ ನಾವು ಅತ್ಮಸ್ಥೈರ್ಯವನ್ನೇ ಪ್ರಮುಖ ವಿಷಯವಾಗಿರಿಸಿಕೊ೦ಡು ಚರ್ಚಿಸುತ್ತೇವೆ, ಅದೆಷ್ಟು ಮುಖ್ಯವೆಂಬ ಬೋಧನೆಗಳನ್ನು ಕೇಳುತ್ತೇವೆ?
ಏನೆ೦ದರೆ, ಯಾವದೋ ಕೆಲಸವನ್ನು ಕೈಗೊಂಡು ಅದನ್ನು ಹೇಗೋ ಮುಗಿಸುವಂತಹುದನ್ನು ನಾವು ಬಹಳಷ್ಟು ರೂಡಿಸಿಕೊಂಡು ಬಿಟ್ಟಿದ್ದೇವೆ. ಆದರೆ ನಿರ್ಧಿಷ್ಟವಾಗಿ ಈ ಕೆಲಸವನ್ನೇ ಮಾಡುತ್ತೇನೆ, ಇದನ್ನು ಮಾಡಲು ನಾನೇ ಯೋಗ್ಯವಾದ ವ್ಯಕ್ತಿಯೆ೦ದು ವಿಶ್ವಾಸವಿಟ್ಟು ಒಂದು ನಿರ್ಧಿಷ್ಟ ಸಮಯದಲ್ಲಿ ಅದನ್ನು ಅಚ್ಚುಕಟ್ಟಾಗಿ ಮುಗಿಸಲು ಅಗತ್ಯವಿರುವ ಅ೦ಶವೇ ಆತ್ಮಸ್ಥೈರ್ಯ! ಅದನ್ನು ಬದುಕಿನ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಅತ್ಮಸ್ಥೈರ್ಯದಿ೦ದೊಡಗೂಡಿದ ಪ್ರಯತ್ನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ.
ಏನೆ೦ದರೆ, ಯಾವದೋ ಕೆಲಸವನ್ನು ಕೈಗೊಂಡು ಅದನ್ನು ಹೇಗೋ ಮುಗಿಸುವಂತಹುದನ್ನು ನಾವು ಬಹಳಷ್ಟು ರೂಡಿಸಿಕೊಂಡು ಬಿಟ್ಟಿದ್ದೇವೆ. ಆದರೆ ನಿರ್ಧಿಷ್ಟವಾಗಿ ಈ ಕೆಲಸವನ್ನೇ ಮಾಡುತ್ತೇನೆ, ಇದನ್ನು ಮಾಡಲು ನಾನೇ ಯೋಗ್ಯವಾದ ವ್ಯಕ್ತಿಯೆ೦ದು ವಿಶ್ವಾಸವಿಟ್ಟು ಒಂದು ನಿರ್ಧಿಷ್ಟ ಸಮಯದಲ್ಲಿ ಅದನ್ನು ಅಚ್ಚುಕಟ್ಟಾಗಿ ಮುಗಿಸಲು ಅಗತ್ಯವಿರುವ ಅ೦ಶವೇ ಆತ್ಮಸ್ಥೈರ್ಯ! ಅದನ್ನು ಬದುಕಿನ ಅವಿಭಾಜ್ಯ ಅಂಗವೆಂದು ಪರಿಗಣಿಸಿ ಅತ್ಮಸ್ಥೈರ್ಯದಿ೦ದೊಡಗೂಡಿದ ಪ್ರಯತ್ನದಲ್ಲಿ ತೊಡಗಿಸಿಕೊಂಡಾಗ ಮಾತ್ರ ಯಶಸ್ಸು ಸಾಧ್ಯ.
* ಯಾವ ಮರವೂ ಧಿಡೀರನೆ ಬುವಿಯಿ೦ದೆದ್ದು ನಿಂತು ಬಿಡುವುದಿಲ್ಲ. ಬೀಜವಾಗಿ, ಮೊಳಕೆಯಾಗಿ, ಗಿಡವಾಗಿ ಬೆಳೆಯುತ್ತಾ ಬೃಹದಾಕಾರ ಪಡೆಯುವುದು. ಹಾಗೆಂದು ಬುವಿಯಿ೦ದ ಅದಾಗಲೇ ಹೊರ ಬಂದು ಕಣ್ಣು ಬಿಡುವ ಮೊಳಕೆ ಸುತ್ತಲೂ ಅಡ್ಡಾದಿಡ್ಡಿಯಾಗಿ ಬೆಳೆದಿರುವ ಕಾಡು ಗಿಡ, ಕಳೆಗಳನ್ನು ಕಂಡು 'ಅಯ್ಯೋ! ಇವರೆದುರು ನಾನೆಷ್ಟು ಚಿಕ್ಕವನು, ಇಲ್ಲಿ ನಾನು ಬೆಳೆಯಲಾರೆನೆ೦ದು ಮುರುಟಿ ಹೋಗುವುದಿಲ್ಲ, ಇಲ್ಲವೇ 'ನಾನು ಇಲ್ಲಿ ಬೆಳೆಯಬಲ್ಲೆನೇಎಂದು ಅಕ್ಕಪಕ್ಕ ವಿಚಾರಿಸ ಹೊರಡುವುದಿಲ್ಲ. ಅದರರ್ಥ ಪ್ರಕೃತಿಯ ಬಹುಭಾಗ ಎಲ್ಲ ಸೃಷ್ಟಿಗಳೂ ತಮ್ಮ ಸಾಮರ್ಥ್ಯದ ಸಂಪೂರ್ಣ ವಿನಿಯೋಗ ಪಡೆದುಕೊಳ್ಳುತ್ತವೆ. ಆದರೆ ನಾವು ಮನುಷ್ಯರು ಮಾತ್ರ ನಮ್ಮಲ್ಲೇನೇ ಸತ್ವ ಅಡಗಿದ್ದರೂ, ಅದರ ಅರಿವು ನಮಗಿದ್ದರೂ ನಮ್ಮ ಸುತ್ತಮುತ್ತಲಿನವರನ್ನು , 'ನಾನು ಮಾಡಬಲ್ಲೆನಾ? ನನ್ನಿಂದ ಆಗಬಲ್ಲದಾ?' ಎಂದು ಕೇಳ ಹೊರಡುತ್ತೇವೆ. ಆಗ ನಮ್ಮ ಬದುಕು ನಮ್ಮ ಕೈತಪ್ಪಿ ಪರರ ಕೈ ಸೇರುತ್ತದೆ. ಆಗ ಅವರು ನಮ್ಮ ಮುಂದಿನ ಬದುಕನ್ನು ನಿರ್ಧರಿಸುತ್ತಾರೆ. ಒಳ್ಳೆಯ ಗುಣ ಸ್ವಭಾವದ ಮನುಜರ ಸಂಪರ್ಕದಲ್ಲಿದ್ದು ಅವರ ನಿರ್ಧಾರಗಳು ಸಮಂಜಸ, ಸಮಯೋಚಿತವಾಗಿದ್ದರೆ ಅದ್ಬುತ! ಆದರೆ ವ್ಯಕ್ತಿಗಳೆಷ್ಟೇ ನಮಗೆ ಸಂಬಂಧಗಳ ಲೆಕ್ಕದಲ್ಲಿ ಹತ್ತಿರವಿದ್ದರೂ ಕೊಂಚ ಅವರಲ್ಲಿ ಈರ್ಷೆ, ಅಸಮಾಧಾನ ಇಣುಕಿದರೆ ನಮ್ಮ ಗುರಿ ತಮ್ಮದಲ್ಲದ್ದು ಎಂಬ ಭಾವ ಬಿಗಿಯಾದರೆ ಅವರ ಒಂದು ಋಣಾತ್ಮಕ ಅಭಿಪ್ರಾಯ ನಮ್ಮ ಗುರಿ, ಕನಸುಗಳ ಪಥವನ್ನೇ ಬುಡಮೇಲು ಮಾಡಿಬಿಡಬಲ್ಲದು!
(image- web)
13 comments:
its kul :)
ನಿಜವಾಗಿಯೂ ಉತ್ತಮ ವಿಚಾರಗಳು, ಆತ್ಮಸ್ಥೈರ್ಯವನ್ನು ಬೆಳೆಯಿಸುವಂತಹ ವಿಚಾರಗಳು, ತಡವರಿಸುತ್ತಿರುವವನಿಗೆ ದಾರಿದೀಪವಾಗವಲ್ಲ ವಿಚಾರಗಳು!
@ Chaitra,
Thank you dear :)
@ ಸುನಾಥ್ ,
ತುಂಬಾ ಧನ್ಯವಾದಗಳು ಕಾಕಾ :)
ನಿಮ್ಮ ವಿಚಾರಗಳು ತು೦ಬಾ ಚೆನ್ನಾಗಿದೆ.
ನಿಜ..ಆತ್ಮ ಸ್ಥೈರ್ಯ ಬೆಳೆಸುವ೦ತಹ ವಿಚಾರಗಳು.
ೠಣಾತ್ಮಕ ಅಭಿಪ್ರಾಯಗಳು ನಮ್ಮ ಗುರಿಯನ್ನು ತಪ್ಪಿಸಿಬಿಡುವುದು ಖ೦ಡಿತಾ ಹೌದು.
@ ಮನ ಮುಕ್ತಾ,
ಪ್ರತಿಕ್ರಿಯೆಗೆ ತು೦ಬಾ ಧನ್ಯವಾದಗಳು. ಆಗಾಗ ಇತ್ತ ಬರುತ್ತಿರಿ :)
ತು೦ಬಾ ಚನ್ನಾಗಿದೆ..
ನಿಮ್ಮ ಬರಹ...
ಆತ್ಮಸ್ಥೈರ್ಯ ಇರುವ ಮನುಶ್ಯ ಏನು ಬೇಕಾದರೂ ಮಾಡಬಲ್ಲ .ಜಯಿಸಬಲ್ಲ..
@ ಚುಕ್ಕಿಚಿತ್ತಾರ ರವರೆ,
ಧನ್ಯವಾದಗಳು :) ಬರುತ್ತಿರಿ :)
dam gud sushi.. I am proud to say that you are my friend..
sushma ravare nimma lekhana tumba channagide..
ಚಿಂತನೆಗೆ ಹಚ್ಚುವಂತಹ ಲೇಖನ...
2nd point, interesting ಆಗಿದೆ ರೀ...
ದುರದೃಷ್ಟವಶಾತ್ ಶಾಲೆಗಳಲ್ಲಿ ಇಂದು ಅಸ್ತಿತ್ವದಲ್ಲಿ ಇರುವ ಮೌಲ್ಯಮಾಪನ ಪದ್ಧತಿ ಆತ್ಮಸ್ಥೈರ್ಯವನ್ನು ಬಲಗೊಳಿಸುವ ಬದಲು ದುರ್ಬಲವಾಗಿಸುತ್ತದೆ. ಪದ್ಧತಿಯ ದೋಷ ಮತ್ತು ಶಿಕ್ಷಕರು ಫಲಿತಾಂಶವನ್ನು ಉಪಯೋಗಿಸುವ ವಿಧಾನ ಇದಕ್ಕೆ ಕಾರಣಗಳಿರಬಹುದು.
@abhijnaa,
welcome to blog..Thanks a lot :)
@ rao sir,
ನಿಮ್ಮ ಮಾತು ನಿಜ. ಶಾಲಾ ಮಾನದಂಡಗಳಿ೦ದ ಮಕ್ಕಳ ಸಾಮರ್ಥ್ಯವನ್ನು ಅಳೆಯ ಹೊರಟಿರುವುದು ಅತಿ ದೊಡ್ಡ ದುರಂತ
@abhijnaa,
welcome to blog..Thanks a lot :)
@ rao sir,
ನಿಮ್ಮ ಮಾತು ನಿಜ. ಶಾಲಾ ಮಾನದಂಡಗಳಿ೦ದ ಮಕ್ಕಳ ಸಾಮರ್ಥ್ಯವನ್ನು ಅಳೆಯ ಹೊರಟಿರುವುದು ಅತಿ ದೊಡ್ಡ ದುರಂತ
Post a Comment