ಕನಸಿನ ಅನುಭವಗಳ ಹೊರತಾಗಿಯೂ ಮನದಲ್ಲಿ ಮೂಡಿದ ಹಾಗೂ ಕನಸಿನ ತುಣುಕುಗಳನ್ನಾಧರಿಸಿ ವಿಸ್ತರಿಸಿದ ಕೆಲವು ಆಲೋಚನೆಗಳ ಸಾಲುಗಳು ಇಲ್ಲಿವೆ..







Wednesday, July 2, 2014

#ನನಗನಿಸಿದ್ದು


ದರ್ಪಣದ ಬಿ೦ಬಕೂ
ಕಾಲದ ಹಸ್ತಕ್ಷೇಪ..
ನೆನ್ನೆ ಕ೦ಡ ನಾನು
ಇಂದು ಕಾಣುತ್ತಿಲ್ಲ!

~ಸುಷ್ಮ #ನನಗನಿಸಿದ್ದು

Sunday, June 29, 2014

# ನೆನಪಿನಿಂದ 2



ಕಿವಿಗೆ ರೆಪ್ಪೆಯಿಲ್ಲದಿರುವುದು ಒಂದು ರೀತಿಯ ಶಾಪ ಹಾಗೂ ವರದಾನ! ಪಾರ್ಕಿನಲ್ಲಿ ನಡೆಯುವಾಗ ಮಧ್ಯವಯಸ್ಕರಿಬ್ಬರು ಜೋರಾಗೆ ಮಾತಾಡಿಕೊ೦ಡು ಹೋಗುತ್ತಿದ್ದದ್ದು ಈ ರೆಪ್ಪೆಯಿಲ್ಲದ ಕಿವಿಗೆ ಬಂದು ತಾಕಿ ತಲೆಯನ್ನೂ ಹೊಕ್ಕಿ ಬಿಟ್ಟಿತು. ಸರಿ, ಅವರು ಯಾರೋ ತಾನು ಮಾಡಿದ ಸಹಾಯವನ್ನು ನೆನೆಯದೇ, ಋಣ ಸಂದಾಯ ಮಾಡದೆ ವರ್ತಿಸುತ್ತಿದ್ದಿದ್ದನ್ನು ಬಹಳ ನೋವಿನಿಂದ ಚರ್ಚಿಸುತ್ತಾ ಜರಿಯುತ್ತಿದ್ದರು. ಬೇಸರವೆನಿಸಿತು. ಹೇಗಲ್ಲವೇ? ಹಾಗೆ ನೋಡಿದರೆ ಸಹಾಯ ಮಾಡಿಸಿಕೊಂಡವರು ಅದನ್ನು ನೆನೆಯಬೇಕು ಮತ್ತು ಸಹಾಯ ಮಾಡಿದವರು ಸ್ಮರಿಸಿ ಲೆಕ್ಕ ಇಡಕೂಡದು ಎನ್ನುತ್ತಾರೆ. ಆದರೆ ಸಹಾಯವನ್ನು ಮಾಡಿಸಿಕೊಂಡು ಕಿಂಚಿತ್ತೂ ನೆನೆಯದ, ಸಾಕಷ್ಟು ಬಾರಿ  ದ್ರೋಹವನ್ನೂ ಬಗೆಯುವ ಪರಿಪಾಠವಿರುವವರೇ ಹೆಚ್ಚಿರುವ ಕಾರಣ ಸಹಾಯ ಮಾಡಿದವರು ನೋವಿನಲ್ಲಿ ಅಪಾತ್ರರಿಗೆ ಮಾಡಿದ ಸಹಾಯವನ್ನು ನೆನೆಯುವ೦ತಾಗಿದೆಯೇನೋ! ಒಟ್ಟಾರೆ, ಒಂದಷ್ಟು ಕೃತಜ್ಞತಾ ಮನೋಭಾವ ಸಹಾಯ ಮಾಡಿಸಿಕೊ೦ಡವರಿಗೂ, ಮಾಡಿಸಿಕೊ೦ಡವನ ನಾಳಿನ ಸ್ವಭಾವಕ್ಕೆ ಚಿ೦ತಿಸದೇ, ಮಾಡಬೇಕೆನ್ನುವ ಸದುದ್ದೇಶ ಮತ್ತು ಅದರಿಂದ ದೊರೆಯುವ ಧನ್ಯತಾಭಾವಗಳಿಗಷ್ಟೇ ಸಹಾಯ ಮಾಡುವ ಸಬಲ ಮನಸ್ಸು ಸಹಾಯಹಸ್ತ ನೀಡುವ ಸಹೃದಯರಿಗೂ, ನಮ್ಮೆಲ್ಲರಿಗೂ  ಬರಲಿ  ಎ೦ದು ಆಶಿಸಬಹುದಷ್ಟೇ! 

~ಸುಷ್ಮ  # ನೆನಪಿನಿಂದ

Thursday, June 26, 2014

# ನೆನಪಿನಿಂದ



ಶಿವಮೊಗ್ಗದ ಸ್ಟೇಷನ್ನಿನಲ್ಲಿ ಟ್ರೈನು ಕಾಯುತ್ತಲಿದ್ದೆ. ಏನೋ ಬೇಕೇ ಬೇಕೆಂದು ರಚ್ಚೆ ಹಿಡಿದಂತಿದ್ದ ೩-೪ ವರ್ಷದ ಮೊಮ್ಮಗುವನ್ನು ಸಂತೈಸುವ ಪ್ರಯತ್ನದಲ್ಲಿದ್ದ೦ತೆ ಕಂಡ ಅಜ್ಜಿ ಹೇಳುತ್ತಿದ್ದಳು, “ಮುಂದೆ ರಾಜನಂಗೆ ಬಾಳ್ತೀಯಂತೆ ಮಗಾ. ಕಾರಲ್ಲಿ ಓಡಾಡುವಿಯಂತೆ.. ಹ೦ಗ್ ಹಠ ಮಾಡಬಾರ್ದು” ಅಜ್ಜಿಯ ಆಶೋತ್ತರಗಳಿಗೆ ಭವಿಷ್ಯದ ಕನಸು, ಆಶಯ ಇಟ್ಟುಕೊಳ್ಳುವ ವಯಸ್ಸಿಗೆ ಇನ್ನೂ ಬಂದಿರದ ಮೊಮ್ಮಗು ಬಗ್ಗಲಿಲ್ಲ. ಇತ್ತ ಅತ್ತೆಲ್ಲೋ ಹೋಗಿದ್ದ ಅಮ್ಮನಂತಿದ್ದ ಹುಡುಗಿ ಬಂದು ಪರಿಪರಿಯಾಗಿ ಓಲೈಸಿದರೂ ಮಗು ಸುಮ್ಮನಾಗಲಿಲ್ಲ. ಕಡೆಗೆ ದಾ೦ಗುಡಿಯಿಡುತ್ತಾ ಓಡೋಡಿ ಬಂದ ಟ್ರೈನಿನ ಸದ್ದು ಕೇಳಿದೊಡನೇ ಮಗು ಥಟ್ಟನೆ ಗಪ್ ಚುಪ್! ಅಷ್ಟೇ ಸಾಕಾಯಿತು ಅವನನ್ನು ಶಾಂತವಾಗಿಸಲು! ಕೆಲವು ಸ೦ದರ್ಭಗಳಿಗೆ ದೊಡ್ಡ ದೊಡ್ಡ ಉತ್ತರಗಳು ಬೇಕಿರುವುದಿಲ್ಲ. ಸಣ್ಣದೊಂದು ಡಿಸ್ಟ್ರಾಕ್ಷನ್ ಸಾಕಿರುತ್ತದೆ. ಅಲ್ಲವೇ? 
# ನೆನಪಿನಿಂದ @ಸುಷ್ಮ

Tuesday, May 20, 2014

@ನನಗನಿಸಿದ್ದು ..



ನಾನು ನಿನಗಾಗಿ ಕಾಯುತ್ತೇನೆ..
ಕಾಯಿಸುವ ಇರಾದೆಯ
ನೀನು ಹೊಂದಿರದಿದ್ದಷ್ಟು ದಿನ !

~ಸುಷ್ಮ ಸಿಂಧು @ನನಗನಿಸಿದ್ದು
('ಪಂಜು' ಪತ್ರಿಕೆಯಲ್ಲಿ ಪ್ರಕಟ)


(image- web)

Saturday, January 18, 2014

@ ನನಗನಿಸಿದ್ದು



ನೀನು ಮಾತಿನರಮನೆಯ
ಕಟ್ಟುವುದರಲ್ಲೇ
ಬಸವಳಿಯುವುದನ್ನು
ನಾ ನೋಡಲಾರೆ...
ಮೌನದಿಂದಿದ್ದು
ಮಾಡಿ ತೋರಿಸಿಬಿಡು!!

@ ನನಗನಿಸಿದ್ದು ~  ©ಸುಷ್ಮಸಿಂಧು

Thursday, January 9, 2014

ನನಗನಿಸಿದ್ದು # Sunset



ನೀನು ಇದ್ದೆಯೆ೦ಬ
ಕುರುಹೂ ಬಿಡಬಯಸದೇ
ಹೊರಡುವ ಹುನ್ನಾರ ನಡೆಸಿದರೂ
‘ಸೆರೆ’ ಹಿಡಿದಿಡುವ ಬಯಕೆ ನನಗೆ !

 A click of the setting  Sun  taken from Home :)
 












#Sunset 

 © ಸುಷ್ಮಸಿಂಧು
Image  © Sushma Sindhu